ಪರಿಸರ

ಹೊಂಬಾಳೆ ಸಮೂಹವು ಪರಿಸರ ಸುಸ್ಥಿರತೆಗೆ ಒತ್ತು ನೀಡಲು ಬದ್ಧವಾಗಿದೆ. ಪರಿಸರ ಹಾಗೂ ಅಭಿವೃದ್ಧಿ ಒಟ್ಟೊಟ್ಟಿಗೇ ಹೆಜ್ಜೆ ಇರಿಸುವಂತೆ ಮಾಡಲು ಪ್ರಾಮುಖ್ಯ ನೀಡುತ್ತದೆ.

ನಾವು ಕೈಗೊಳ್ಳುವ ಯಾವುದೇ ಯೋಜನೆಯು ಜನರು, ಜೀವಜಂತುಗಳು, ಸಸ್ಯರಾಶಿ ಮತ್ತು ಭೂಮಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆಂಬುದು ನಮ್ಮ ಗಮನದಲ್ಲಿದೆ. ಹೀಗಾಗಿ ನಿರ್ಮಾಣ ಯೋಜನೆ ಕೈಗೊಳ್ಳುವ ವೇಳೆ ಪರಿಸರ ಸಂರಕ್ಷಣೆ ನಮ್ಮ ಗುರಿಯಾಗಿರುತ್ತದೆ. ಯೋಜನೆ ಪೂರ್ಣಗೊಂಡ ಬಹುಕಾಲದ ನಂತರವೂ ಪರಿಸರವನ್ನು ಸಂರಕ್ಷಿಸುವ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತದೆ.

ನಮ್ಮ ಪರಿಸರ ನೀತಿಯ ಭಾಗವಾಗಿ, ನಾವು:

  • ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಪರಿಸರ ಸ್ನೇಹಿ ವಿಧಾನ ಅನುಸರಿಸುವಂತೆ ಎಲ್ಲರಿಗೂ ತಿಳಿಸಿ ಸಾಂಸ್ಥಿಕ ಬದ್ಧತೆಯನ್ನು ಪಾಲಿಸುತ್ತೇವೆ.
  • ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆ ವೇಳೆ ಪರಿಸರದ ಮೇಲೆ ದುಷ್ಪರಿಣಾಮ ತಗ್ಗಿಸುವಂತೆ ಅಥವಾ ದುಷ್ಪರಿಣಾಮ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ.
  • ಪರಿಸರ ಹಾನಿ ತಡೆಯುವ ಅಥವಾ ಮಿತಗೊಳಿಸುವ ಎಂಜಿನಿಯರಿಂಗ್ ಮತ್ತು ನಿರ್ಮಾಣ ವಿಧಾನಗಳ ಬಗ್ಗೆ ನಮ್ಮ ಗ್ರಾಹಕರಿಗೆ ತಾಂತ್ರಿಕ ಹಾಗೂ ಆರ್ಥಿಕ ಮಾಹಿತಿ, ಸಲಹೆ ಇತ್ಯಾದಿ ಒದಗಿಸುತ್ತೇವೆ.
  • ಪರಿಸರದ ಮೇಲಾಗಬಹುದಾದ ಪರಿಣಾಮಗಳನ್ನು ಮೊದಲೇ ಗುರುತಿಸುತ್ತೇವೆ. ಅದಕ್ಕೆ ತಕ್ಕಂತೆ ಗ್ರಾಹಕರ ಜೊತೆ ಸೇರಿ ಪರಿಹಾರಗಳನ್ನು ಹುಡುಕಿ ಅದನ್ನು ಕಾರ್ಯಾನುಷ್ಠಾನಗೊಳಿಸುತ್ತೇವೆ.
  • ಪರಿಸರ ಸಂಬಂಧಿ ನಿಯಂತ್ರಣ ನೀತಿಗೆ ಅನುಗುಣವಾಗಿ ನಡೆದುಕೊಳ್ಳಲು ಗ್ರಾಹಕರಿಗೆ ನೆರವು ನೀಡುತ್ತೇವೆ.