ಗುತ್ತಿಗೆ ಸೇವೆಗಳು

ಕಂಪೆನಿಗಳಿಗೆ ತಮ್ಮ ಉದ್ದಿಮೆಗೆ ತಾತ್ಕಾಲಿಕವಾಗಿ ಅಥವಾ ಕಾಯಂ ಆಗಿ ಬೇಕಾಗುವ ಸಂಬಂಧಪಟ್ಟ ಕುಶಲಿಗರನ್ನು ಹೊಂದಾಣಿಕೆ ಮಾಡಿಕೊಡುವ ಕಾರ್ಯವನ್ನು ಹೊಂಬಾಳೆ ಸಮೂಹ ಮಾಡುತ್ತದೆ. ನಿಗದಿತ ಸ್ಥಳಕ್ಕೆ ತೆರಳಿ ಯಾವುದಾದರೂ ನಿಶ್ಚಿತ ಕೆಲಸ ಮಾಡುವ ಸಂದರ್ಭ ಉಂಟಾದರೆ ಸಿಬ್ಬಂದಿಯನ್ನು ಕಳುಹಿಸಿ ಅದನ್ನು ಮಾಡಿಕೊಡಲಾಗುತ್ತದೆ. ಸಿಬ್ಬಂದಿ ವರ್ಗದವರೊಂದಿಗೆ ಸಮಾಲೋಚನೆ ನಡೆಸಿ ಪ್ರತಿಯೊಬ್ಬರ ಕೌಶಲ್ಯ ಮಟ್ಟ, ಮನೋಧೋರಣೆ ಮತ್ತು ಅವಲಂಬನೆಗಳನ್ನು ಅವಲೋಕಿಸಲಾಗುತ್ತದೆ. ಸೂಕ್ತ ಸಾಧನ ಸಲಕರಣೆಗಳು, ಸಂಚಾರ ವ್ಯವಸ್ಥೆಯ ಅವಲಂಬನೆ ಮತ್ತು ಉಲ್ಲೇಖಗಳನ್ನು ಪರಾಮರ್ಶಿಸಲಾಗುತ್ತದೆ.