ವ್ಯವಸ್ಥಾಪನೆ

ವೃತ್ತಿಪರ ವ್ಯವಸ್ಥಾಪನೆಯು ಹೊಂಬಾಳೆ ಸಮೂಹದ ವೈಶಿಷ್ಟ್ಯವಾಗಿದ್ದು, ಇದು ನಮಗೆ ಕಾರ್ಯತಾಂತ್ರಿಕ ಅನುಕೂಲತೆಗಳನ್ನು ಒದಗಿಸಿಕೊಡುತ್ತದೆ. ವೃತ್ತಿಪರ ಶಿಕ್ಷಣ ಮತ್ತು ಉದ್ಯಮದ ಖುದ್ದು ಅನುಭವವಿರುವ ಹಿರಿಯರು ನಮ್ಮ ವ್ಯವಸ್ಥಾಪನಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಾವು ಅಳವಡಿಸಿಕೊಂಡಿರುವ, ಸ್ಪಷ್ಟ ನಿಗದಿತ ಕಾರ್ಯವಿಧಾನಗಳಿಂದ ಕೂಡಿದ ಮಧ್ಯವರ್ತಿ ಹಂತಗಳಿಲ್ಲದ ವಿಕೇಂದ್ರೀಕೃತ ವ್ಯವಸ್ಥೆ ಹಾಗೂ ಮುಕ್ತ ಸಂವಹನ ಪದ್ಧತಿಯು, ಯೋಜನೆಗೆ ಸಂಬಂಧಿಸಿದಂತೆ ಎಲ್ಲರಿಗೂ ಯಾವುದೇ ಸಮಯದಲ್ಲಿ ಒಮ್ಮೆಗೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ, ತ್ವರಿತವಾಗಿ ಸೂಕ್ತ ನಿರ್ಧಾರ ತಳೆಯಲು ಮತ್ತು ಅನಪೇಕ್ಷಿತ ಅಡೆತಡೆಗಳನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ.

ನಾವು ಅಳವಡಿಸಿಕೊಂಡಿರುವ ವಿಶಿಷ್ಟ ವ್ಯವಸ್ಥಾಪನಾ ಶೈಲಿ ಮತ್ತು 200ಕ್ಕೂ ಹೆಚ್ಚಿರುವ ನಮ್ಮ ಸಿಬ್ಬಂದಿಯ ವೃತ್ತಿಪರತೆಯು ನಮ್ಮ ಸಂಸ್ಥೆಯನ್ನು ಇತರ ಸಂಸ್ಥೆಗಳಿಗಿಂತ ವಿಭಿನ್ನವಾಗಿಸಿದೆ. ಇದು ನಮಗೆ ರಾಷ್ಟ್ರದ ಯಾವುದೇ ಭಾಗದಲ್ಲಿ ಉತ್ಕೃಷ್ಠ ಗುಣಮಟ್ಟದಿಂದ ಕೂಡಿದ ವಿಶಾಲ ಶ್ರೇಣಿಯ ನಿರ್ಮಾಣ ಸೇವೆಗಳನ್ನು ಒದಗಿಸುವ ಶಕ್ತಿ-ಸಾಮರ್ಥ್ಯಗಳನ್ನು ನೀಡಿದೆ.