ಗುಣಮಟ್ಟ

ಗುಣಮಟ್ಟವು ಹೊಂಬಾಳೆ ಸಮೂಹದ ಮುಖ್ಯ ಪ್ರೇರಣೆಯಾಗಿದೆ. 25 ವರ್ಷಗಳಿಂದ ಗಳಿಸಿರುವ ನಿರ್ಮಾಣ ವ್ಯವಸ್ಥಾಪನಾ ಪರಿಣತಿ, ಆಧುನಿಕ ಸಾಧನ ಸಲಕರಣೆಗಳ ಬಳಕೆ, ಕೌಶಲ್ಯಪೂರ್ಣ ಹಾಗೂ ಅನುಭವಿ ಸಿಬ್ಬಂದಿ, ಉತ್ಕೃಷ್ಠ ಸಾಮಗ್ರಿಗಳು, ಗುಣಮಟ್ಟದ ಉಪಕರಣಗಳು ಮತ್ತು ನಿರಂತರ ಮೇಲ್ವಿಚಾರಣೆ ಹೊಂಬಾಳೆ ನಿರ್ಮಾಣ ಯೋಜನೆಗಳ ಶ್ರೇಷ್ಠ ಗುಣಮಟ್ಟವನ್ನು ಖಾತ್ರಿಪಡಿಸುವ ಅಂಶಗಳಾಗಿವೆ.

ಪ್ರತಿಯೊಂದು ಪ್ರಕ್ರಿಯೆಗಳಿಗೂ ಹಿರಿಯ ಸೈಟ್ ಸೂಪರ್ ವೈಸರ್ ಗಳ ನಿಯೋಜನೆ, ದೀರ್ಘ ಡಾಕ್ಯುಮೆಂಟೇಷನ್, ವರದಿ ಸಲ್ಲಿಸುವಿಕೆ, ಕಟ್ಟುನಿಟ್ಟಾದ ಲೆಕ್ಕಪತ್ರ ಪರಿಶೀಲನೆ, ವ್ಯವಸ್ಥಾಪನಾ ತಂಡದ ನಿಗದಿತ ಭೇಟಿ, ನಿಯಮಿತ ಪ್ರಗತಿ ಪರಿಶೀಲನೆ ಅತ್ಯುತ್ತಮ ಫಿನಿಷಿಂಗ್, ಸೂಕ್ಷ್ಮ ಸಂಗತಿಗಳೆಡೆಗೂ ಗಮನ ನೀಡುವಿಕೆ ಮತ್ತು ಕಾಲಮಿತಿಯೊಳಗೆ ಯೋಜನೆಗಳನ್ನು ಮುಗಿಸಲು ಸಹಕಾರಿಯಾಗಿವೆ.

ಸುರಕ್ಷಿತವಾದ ರೀತಿಯಲ್ಲಿ ಹಾಗೂ ಸಕಾಲದಲ್ಲಿ ನಿಗದಿತ ಯೋಜನೆಗಳನ್ನು ಮುಗಿಸುವ ಮೂಲಕ ಅಧಿಕ ಗ್ರಾಹಕ ತೃಪ್ತಿಯನ್ನು ನೀಡಲು ಹೊಂಬಾಳೆ ಸಮೂಹವು ಪರಿಶ್ರಮಿಸುತ್ತದೆ.

ನಮ್ಮ ಗ್ರಾಹಕರ ಪ್ರಶಂಸೆ, ಅವರಿಂದ ಪುನಃ ಪುನಃ ಬರುವ ವ್ಯವಹಾರ ಕೋರಿಕೆಗಳು ಹಾಗೂ ವಿಸ್ತಾರಗೊಳ್ಳುತ್ತಿರುವ ನಮ್ಮ ಕಾರ್ಯಾಚರಣೆಯು ಸಮೂಹದ ಗುಣಮಟ್ಟ ಹಾಗೂ ಗ್ರಾಹಕ ಸಂತೃಪ್ತಿ ನಾವು ಹೊಂದಿರುವ ಬದ್ಧತೆಗೆ ನಿದರ್ಶನಗಳಾಗಿವೆ.