ಹೊಂಬಾಳೆ ಗ್ರೂಪ್ ಅನ್ನು ವಿಜಯಕುಮಾರ್ ಟಿ. ಅವರು ಗುತ್ತಿಗೆ ಬಿಲ್ಡರ್ ಆಗಿ 2007 ರಲ್ಲಿ ಸ್ಥಾಪಿಸಿದರು. ಗ್ರೂಪಿನ ಯಶಸ್ಸು ಗ್ರೂಪ್ ನ್ನು ಕಟ್ಟಿ ಬೆಳೆಸಿದ ವಿಜಯಕುಮಾರ್ ಟಿ ಅವರಿಗೆ ಸಲ್ಲುತ್ತದೆ. ವೃತ್ತಿಪರತೆ ಮತ್ತು ಕೆಲಸದ ಗುಣಮಟ್ಟಕ್ಕಾಗಿ ಮೆಚ್ಚುಗೆ ಪಡೆಯುವಂತಹ ಸಂಘಟನೆಯನ್ನು ರಚಿಸುವ ದೃಷ್ಟಿ ಅವರದಾಗಿತ್ತು. ಅದರಲ್ಲಿ ಅವರು ಯಶಸ್ಸನ್ನೂ ಸಹ ಕಂಡರು.
2011 ರಲ್ಲಿ ಕಂಪೆನಿಯನ್ನು ಯುವ ಮತ್ತು ಮೊದಲ ತಲೆಮಾರಿನ ಉದ್ಯಮಿಗಳೊಂದಿಗೆ ಸೀಮಿತ ಹೊಣೆಗಾರಿಕೆಯ ಸಹಭಾಗಿತ್ವ (ಎಲ್.ಎಲ್.ಪಿ. ) ಸಂಸ್ಥೆಯಾಗಿ ಸಂಘಟಿಸಲಾಯಿತು. ಅಂದಿನಿಂದ ಕಂಪನಿಯು ಸಾಕಷ್ಟು ಬೆಳವಣಿಗೆ ಕಂಡಿದೆ ಹಾಗೂ ಎಲ್ಲ ಪಾಲುದಾರರಿಗೆ ಗಮನಾರ್ಹ ಮೌಲ್ಯವನ್ನು ಸೃಷ್ಟಿಸಿದೆ. 2014 ರಲ್ಲಿ ಖಾಸಗಿ ನಿಯಮಿತ ಕಂಪೆನಿಯಾಗಿ ಸಂಘಟಿತವಾದ ಹೊಂಬಾಳೆ ಗ್ರೂಪ್ ಈಗ ಉದ್ಯಮದ ವೃತ್ತಿಪರರ ತಂಡದಿಂದ ನಿರ್ವಹಿಸಲ್ಪಡುತ್ತಿದೆ.
ಹೊಂಬಾಳೆ ಗ್ರೂಪ್, ಮೊನೊಲಿಥಿಕ್ ರಚನೆ ರೀತಿಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಮನೆಗಳ ನಿರ್ಮಾಣವನ್ನು ತ್ವರಿತ ಗತಿಯಲ್ಲಿ ನಿರ್ವಹಿಸುತ್ತಿದೆ. ಇಂದು ಹೊಂಬಾಳೆ ಗ್ರೂಪ್ ಗೌರವಾನ್ವಿತ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯಾಗಿ ಹೊರಹೊಮ್ಮಿದೆ. ವಠಾರಗಳು, ಮಾಸ್ ಹೌಸಿಂಗ್, ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳು ಮತ್ತು ಇತರ ಮೂಲಸೌಕರ್ಯ ನಿರ್ಮಾಣದಂತಹ ಯೋಜನೆಗಳಿಗೆ ನಮ್ಮ ಸೇವೆಗಳನ್ನು ವಿಸ್ತರಿಸಲಾಗಿದೆ.